back to top
Monday, September 22, 2025

ಚಿತ್ರದುರ್ಗದಲ್ಲಿ ಅಪಘಾತ | ಲಾರಿಗೆ ಕಾರು ಡಿಕ್ಕಿ : ಸ್ಥಳದಲ್ಲಿ ಐವರು ದುರ್ಮರಣ

ರಾಜ್ಯ ಸುದ್ದಿ: ಚಿತ್ರದುರ್ಗ ತಾಲೂಕಿನ ತಮಟಗಲ್ಲು ಸಮೀಪದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48 ರಲ್ಲಿ ಭಾನುವಾರ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಇನ್ನೊವಾ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು , ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ 06 ಜನರ ಪೈಕಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬರು ಗಂಭಿರವಾಗಿ ಗಾಯಗೊಂಡಿದ್ದಾರೆ.

ಕಾರಿನಲ್ಲಿದ್ದವರು ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ತೆರಳಿ ದರ್ಶನ ಮುಗಿಸಿ ವಾಪಸಾಗುತ್ತಿದ್ದರು ಎನ್ನಲಾಗಿದೆ.ಮೃತಪಟ್ಟವರ ಪೈಕಿ ಬೆಂಗಳೂರಿನ ಮೂಲದ ಶಾಂತಮೂರ್ತಿ (60) , ರುದ್ರಸ್ವಾಮಿ (52) , ಚಿದರಂಬರಾಚಾರ್‌ (50) , ಮಲ್ಲಿಕಾರ್ಜುನ (50) ಎಂದು ಗುರುತಿಸಿದ್ದು , ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ.

ಬೆಂಗಳೂರು ಕಡೆ ಚಲಿಸುತ್ತಿದ್ದ ತಮಿಳುನಾಡು ಮೂಲದ ಲಾರಿ ತಮಟಗಲ್ಲು ಬಳಿ ರಸ್ತೆ ಬದಿಯಲ್ಲಿ ನಿಂತಿತ್ತು. ಹಿಂದಿಯಿಂದ ವೇಗವಾಗಿ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆದಿದ್ದು , ಡಿಕ್ಕಿಯ ರಭಸಕ್ಕೆ ಕಾರು ನುಜ್ಜಾಗಿದೆ, ಅತಿ ವೇಗ ಮತ್ತು ಕಾರು ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.ಘಟನೆಯ ಕುರಿತು ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

spot_img

ಅಭಿನಯ ಅನುಬಂಧ : ಬಹು ಕಾಲದ ಗೆಳೆಯನೊಂದಿಗೆ ಹಸೆಮಣೆಗೆ ಸಜ್ಜು !

ಸಿನಿ ಸುದ್ದಿ: ಮಾತು ಬರದೇ ಹೋದರೂ ತಮ್ಮ ಅಮೋಘ ನಟನೆಯ ಮೂಲಕ ಗಮನ ಸೆಳೆದಿದ್ದ ನಟಿ ಅಭಿನಯ ಅವರು ತಮ್ಮ ಬಹುಕಾಲದ ಗೆಳೆಯನೊಂದಿಗಿನ ನಿಶ್ಚಿತಾರ್ಥವನ್ನು ಘೋಷಿಸಿದ್ದಾರೆ. ಬಹು ದಿನದಿಂದ ಪ್ರಮುಖ ನಟನೊಬ್ಬನೊಂದಿಗೆ...

MORE ARTICLES

ಅಬ್ಬಾ ಅಂತೂ ಭೂಮಿಗೆ ವಾಪಸ್ಸಾಗುತ್ತಿದ್ದಾರೆ ಸುನಿತಾ ವಿಲಿಯಮ್ಸ್‌ !

ಅಮೆರಿಕ: ಕಳೆದ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಸಿಲುಕಿಕೊಂಡಿರುವ...

ದಾಖಲೆ ಮಟ್ಟಕ್ಕೆ ಚಿನ್ನದ ದರ ಏರಿಕೆ !

ಚಿನ್ನದ ಬೆಲೆಯು ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಕಳೆದ ಆರು ತಿಂಗಳಿನಿಂದ...

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Recent posts

- Advertisement -spot_img
- Advertisement -spot_img

Popular Categories

spot_img
error: Content is protected !!