ಕಣ್ಣಿಗೆ ಕಾಣದೇ ಕಣ್ಮನ ಸೆಳೆಯುವ ಕಾನೂರು ಫಾಲ್ಸ್.

ಜಲಪಾತಗಳ ತವರುಮನೆ, ಜಲಪಾತಗಳ ಜಿಲ್ಲೆ ಎಂತಲೇ ಪ್ರಸಿದ್ದಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳನ್ನು ನೋಡದಿರುವವರು ಕಮ್ಮಿ. ಪ್ರಯಾಣದ ಹುಚ್ಚು , ನಿಸರ್ಗದ ಪ್ರೀತಿಯಿರುವ ಬಹುತೇಕರು ಉತ್ತರಕನ್ನಡ ವನ್ನ ಒಂದ್ಸಲ ಸುತ್ತಿಯೇ ಸುತ್ತಿರುತ್ತಾರೆ.ಮಳೆಗಾಲ ಸುರುವಾದರೆ ಸಾಕು , ಜಲಪಾತಗಳೆಲ್ಲ ಮೈದುಂಬಿ , ಭೊರ್ಗರೆಯುತ್ತ ಧುಮ್ಮುಕ್ಕುತ್ತವೆ. ಧುಮ್ಮುಕ್ಕುವ ರಭಸದ ಜೊತೆಗೆ ಮೋಡದ ರೀತಿ ನೀರ ಹನಿಯ ಮಾಯೆಯೊಂದು ಸೃಷ್ಟಿಸಿ ನೋಡುಗರ ಕಣ್ಮನ ಸೆಳೆಯುತ್ತವೆ.ಬಹುತೇಕ ಜಲಪಾತಗಳು ಕೆಳಗೆ ಬಿಳುವುದನ್ನು ನೋಡುತ್ತೆವೆ. ಆದರೆ ಇಲ್ಲಿ ನೋಡ ಹೊರಟಿರುವ ಜಲಪಾತದ್ದು ಬೆರೆಯದೇ ಕಥೆ. ಇದು ಕಾಣಲ್ಲ, ಕಣ್ಮನ ಸೆಳೆಯುತ್ತೆ.ಅದುವೆ ಕಣ್ಣಿಗೆ ಕಾಣದೇ ಕಣ್ಮನ ಸೆಳೆಯುವ ಕಾನೂರು ಫಾಲ್ಸ್. ಊರ್ಫ ದೇವಕರ ಫಾಲ್ಸ್ ಅಲಿಯಾಸ ವಜ್ರ ಫಾಲ್ಸ್.
ಏನಿದರ ವಿಶೇಷ….
ಬಹುತೇಕ ಜಲಪಾತಗಳು ಭೊರ್ಗರೆಯುತ್ತ ಮೇಲಿಂದ ಕೆಳಗೆ ಬಿಳುವುದನ್ನ ನೋಡಿ ಕಣ್ತುಂಬಿಕೊಳ್ಳುತ್ತೆವೆ. ಆದರೆ ಈ ಜಲಪಾತಕ್ಕೆ ತಾವನಾದರೂ ಬೇಟಿ ನೀಡಿದರೆ, ನೀರು ಧುಮ್ಮುಕ್ಕುವ ಜಾಗದಲ್ಲಿಯೇ ನಿಂತು ನೋಡಬಹುದು. ನಿಸರ್ಗದ ಮಡಿಲಲ್ಲಿ , ಜಲಪಾತದ ಮೇಲೆ ನಿಂತು ರೀಲ್ಸ ಮಾಡುವವರಿಗೆ , ಪೋಟೋಶೂಟ್ ಮಾಡುವವರಿಗೆ, ಡ್ರೋನಗಳಲ್ಲಿ ವಿಡಿಯೋ ತುಣುಕುಗಳನ್ನು ಸೆರೆ ಹಿಡಿಯಬೇಕೆಂದುಕೊಂಡವರಿಗಂತೂ ಹೇಳಿ ಮಾಡಿಸಿದ ತಾಣವಿದು. ಕಾಡ ಮಧ್ಯದಿಂದ ಹರಿದು ಬರುವ ಗಂಗೆ ಚೂರೇ ಚೂರು ಬಯಲು ಮಾಡಿಕೊಂಡು ಬಂದು 300 ಅಡಿಗಳಷ್ಟು ಆಳಕ್ಕೆ ಜಿಗಿದು ಮತ್ತೆ ಮೆಲ್ಲಗೆ ಅಕ್ಕಪಕ್ಕದ ಬೆಟ್ಟದ ಮಧ್ಯೆ ಸಾಗುವ ಕಾನೂರು ಫಾಲ್ಸ ಸ್ವಲ್ಪ ವಿಭಿನ್ನ.
ದಾರಿ ಯಾವುದಯ್ಯ ದೇವಕರ ಫಾಲ್ಸ್ ಗೆ?
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ದಿಂದ ಕಾರವಾರಕ್ಕೆ ಹೋಗುವ ದಾರಿಯಲ್ಲಿ 10 ಕಿ ಮೀ ದೂರ ಸಾಗಿದ ಮೇಲೆ ಇಡಗುಂದಿ ಊರಲ್ಲಿ ಬಲಕ್ಕೆ ತಿರುಗಿಸಿದರೆ ವಜ್ರಳ್ಳಿ ಊರ ಕಡೆಗೆ ನಿಮ್ಮ ಪಯಣ ಶುರುವಾಗತ್ತೆ, , ವಜ್ರಳ್ಳಿ , ಬಾಸಲ ಹೀಗೆ ಭತ್ತದ ಗದ್ದೆ , ಅಡಿಕೆ ತೋಟಗಳ ಮಧ್ಯೆ ಸಾಗುವ ನೀವು ಪೂರ್ಣ ಪ್ರಮಾನದ ಕಾಡ ಸೇರುತ್ತಿರಿ. ಅಲ್ಲಿರುವ ಫಾರೆಸ್ಟ ಚೆಕ್ ಪೊಸ್ಟ ನಲ್ಲಿ 10 ರೂ ಟಿಕೇಟ್ ಪಡೆದು ಸ್ವಲ್ಲಪ ದೂರ ಸಾಗಿದರೆ ಅಲ್ಲಿಗೆ ನಿಮ್ಮ ವಾಹನಕ್ಕೆ ಬ್ರೆಕ್ ಹಾಕಲೇಬೇಕು. ಅಲ್ಲಿಂದ ನಡೆದುಕೊಂಡು ಹೋಗಬೇಕು ಒಂದೆರಡು ಕಿಲೋ ಮೀಟರ್. ಹಸಿರು ಹಾದಿಯ ಸವೆಯುತ ಸಾಗುವ ನಿಮಗೆ ಭೊರ್ಗರೆಯವ ಸದ್ದಿನೊಂದಿಗೆ ಸ್ವಾಗತಿಸತ್ತೆ ಕಾನೂರು ಫಾಲ್ಸ್.
ತುಂಬಾ ಚೆನ್ನಾಗಿದೆ.