ಅಂತರಾಷ್ಟ್ರೀಯ ಸುದ್ದಿ : ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ಪ್ರಧಾನಿಯಾಗಿದ್ದ ಜಸ್ಟಿನ್ ಟ್ರುಡೊ ಅವರು ಕಳೆದ ಜನವರಿ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು. ಆಡಳಿತಾರೂಢ ಲಿಬರಲ್ ಪಾರ್ಟಿ ನಾಯಕರಾಗಿ ಕಾರ್ನಿ ಇತ್ತೀಚೆಗೆ ಆಯ್ಕೆಯಾಗಿದ್ದರು.
ಯಾರು ಈ ಮಾರ್ಕ್ ಕಾರ್ನಿ?
2008 ರಿಂದ ಬ್ಯಾಂಕ್ ಆಫ್ ಕೆನಡಾದ ಮುಖ್ಯಸ್ಥರಾಗಿ ಆರ್ಥಿಕ ಬಿಕ್ಕಟ್ಟುಗಳನ್ನು ನಿಭಾಯಿಸಿದ ಮಾರ್ಕ್ ಕಾರ್ನಿ, ನಂತರ 2013 ರಲ್ಲಿ ಬ್ಯಾಂಕ್ ಆಫ್ ಇಂಗ್ಲೆಂಡ್ ನ್ನು ನಡೆಸಿದ ಮೊದಲ ಬೇರೆ ದೇಶದ ನಾಗರಿಕರಾಗಿದ್ದರು. ಯುಕೆಯಲ್ಲಿ ಬ್ರೆಕ್ಸಿಟ್ನ ಕೆಟ್ಟ ಪರಿಣಾಮಗಳನ್ನು ನಿರ್ವಹಿಸಲು ಸಹಾಯ ಮಾಡಿದರು.