ಅಂತರಾಷ್ಟ್ರೀಯ ಸುದ್ದಿ : ಮಾರಿಷಸ್ ದೇಶದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾರಿಷಸ್ ರಾಷ್ಟ್ರಪತಿ ಧರಮ್ ಗೋಕೂಲ್ ಅವರು ಮಾರಿಷಸ್ ದೇಶದ ಅತ್ಯುನ್ನತ ಗೌರವವಾದ ‘ದಿ ಗ್ರಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆ್ಯಂಡ್ ಕೀ ಆಫ್ ದಿ ಇಂಡಿಯನ್ ಓಷನ್’ ಅನ್ನು ನೀಡಿ ಗೌರವಿಸಿದರು.
ಪ್ರಧಾನಿ ಮೋದಿ ಅವರು ಮಾರಿಷಸ್‌ನ ಈ ಗೌರವವನ್ನು ಪಡೆದ ಮೊದಲ ಭಾರತೀಯರಾಗಿದ್ದಾರೆ. ಮಾರಿಷಸ್ ನಾಗರಿಕರನ್ನು ಹೊರತುಪಡಿಸಿ, ಈ ಗೌರವವನ್ನು ಪಡೆದ ಐದನೇಯ ವಿದೇಶಿ ವ್ಯಕ್ತಿಯಾಗಿದ್ದಾರೆ . ಮಾರಿಷಸ್‌ನ ‘ಸ್ವಾತಂತ್ರ್ಯ ದಿನ’ದಂದು (ಮಾ.12, 2025 ) ಪ್ರಧಾನಿ ಮೋದಿ ಅವರಿಗೆ ಈ ಗೌರವ ನೀಡಲಾಯಿತು.

ಮಾರಿಷಸ್‌ನ ಅತ್ಯುನ್ನತ ಗೌರವ ನೀಡಿದ್ದಕ್ಕಾಗಿ ಹೃದಯ ತುಂಬಿ ಧನ್ಯವಾದಗಳು. ಇದು ನನಗೆ ಸಂದ ಗೌರವ ಮಾತ್ರವಲ್ಲ. ಇದು 140 ಕೋಟಿ ಭಾರತೀಯರಿಗೆ ಸಂದ ಗೌರವ. ಉಭಯ ರಾಷ್ಟ್ರಗಳ ಐತಿಹಾಸಿಕ ಬಾಂಧವ್ಯಕ್ಕೆ ಸಂದ ಗೌರವವಾಗಿದೆ.
ನರೇಂದ್ರ ಮೋದಿ, ಪ್ರಧಾನಿ.
ಈ ಗೌರವದೊಂದಿಗೆ ಪ್ರಧಾನಿ ಮೋದಿಯವರು ಭಾಜನರಾದ ಅಂತರಾಷ್ಟ್ರೀಯ ಪ್ರಶಸ್ತಿಗಳ ಸಂಖ್ಯೆ 21 ಕ್ಕೆ ತಲುಪಿದೆ. ಭಾರತ ಮತ್ತು ಮಾರಿಷಸ್‌ನ ದ್ವಿಪಕ್ಷೀಯ ಒಪ್ಪಂದಗಳನ್ನು ಬಲಪಡಿಸಿದ ಹೆಜ್ಜೆಗುರುತಿಗಾಗಿ, ಪ್ರಧಾನಿ ಮೋದಿ ಅವರಿಗೆ ಈ ಗೌರವ ನೀಡಲಾಗಿದೆ.