ಅಮೆರಿಕ: ಕಳೆದ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಸಿಲುಕಿಕೊಂಡಿರುವ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ನೋರ್ ಅವರು ಮಾರ್ಚ್ 19ರಂದು ಭೂಮಿಗೆ ವಾಪಸಾಗುವ ಸಾಧ್ಯತೆಯಿದೆ.
ಈ ಇಬ್ಬರು ಗಗನಯಾನಿಗಳನ್ನು ಕರೆತರಲು ನಾಸಾದ ಕ್ರೂ-10 ಮಿಷನ್ಅನ್ನು ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ‘ಕ್ರೂ ಡ್ರಾಗನ್’ ಹೆಸರಿನ ಗಗನನೌಕೆಯನ್ನು ಹೊತ್ತುಕೊಂಡ ಸ್ಪೇಸ್ಎಕ್ಸ್ನ ‘ಫಾಲ್ಕನ್ 9’ ರಾಕೆಟ್ ಇಲ್ಲಿನ ಕೆನಡಿ ಸ್ಪೇಸ್ ಸೆಂಟರ್ನಿಂದ ಸ್ಥಳೀಯ ಕಾಲಮಾನ ಶುಕ್ರವಾರ ರಾತ್ರಿ 7.03ಕ್ಕೆ ಗಗನಕ್ಕೆ ಹಾರಿತು.
ಈ ಗಗನನೌಕೆಯಲ್ಲಿ ನಾಸಾದ ಆ್ಯನ್ ಮೆಕ್ಲೀನ್ ಮತ್ತು ನಿಕೋಲ್ ಆಯರ್ಸ್, ಜಪಾನ್ನ ತಕುಯಾ ಒನಿಶಿ ಹಾಗೂ ರಷ್ಯಾದ ಕಿರಿಲ್ ಪೆಸ್ಕೊವ್ ಈ ನಾಲ್ವರು ಗಗನಯಾನಿಗಳು ಅಂತರಾಷ್ಟ್ರೀಯ ಭಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣಿಸಿದ್ದಾರೆ.
SUPER