ರಾಜ್ಯ ಸುದ್ದಿ : ಬಂಗಾರ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತವಾಗಿರುವ ರನ್ಯಾ ರಾವ್ ಗೆ ಬೆಂಗಳೂರು ವಿಶೇಷ ಅಪರಾಧ ನ್ಯಾಯಾಲಯ ಶುಕ್ರವಾರ ಜಾಮೀನು ನೀರಾಕರಿಸಿದೆ.
DRI ವಕೀಲರು ಮತ್ತು ರನ್ಯಾ ರಾವ್ ಪರ ವಕೀಲರ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ರನ್ಯಾ ಗೆ ಪರಪ್ಪನ ಅಗ್ರಹಾರವೇ ಸದ್ಯಕ್ಕೆ ಆಶ್ರಯವಾಗಿದೆ.
ಈ ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವಾಗಿದ್ದು, ಅರ್ಜಿದಾರರಿಗೆ ಜಾಮೀನು ನೀಡಬಾರದೆಂದು DRI ವಕೀಲರು ವಾದಿಸಿದ್ದಾರೆ. ಪ್ರಕರಣದ ಆರೋಪಿ ರನ್ಯಾ ರಾವ್ ತನಿಖೆಗೆ ಸಹಕರಿಸಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ಎ 2 ಆಗಿರುವ ತರುಣ ರಾಜ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.