ವಾಣಿಜ್ಯ/ ಹಣಕಾಸು : ಎಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಕಂಪನಿ, ಏರ್‌ಟೆಲ್ ಮತ್ತು ಜಿಯೋ ಸಹಭಾಗಿತ್ವದಲ್ಲಿ ಭಾರತ ಪ್ರವೇಶಿಸಲು ತಯಾರಿ ಶುರು ಮಾಡಿದೆ. ಸ್ಟಾರ್‌ಲಿಂಕ್ ಈಗಾಗಲೇ 100ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಿಸುತ್ತಿದ್ದು, ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ನೀಡುತ್ತದೆ. ಸದ್ಯದ ಟವರ್ ಮೂಲಕ ಇಂಟರ್ ನೆಟ್ ಸಿಗುವ ವ್ಯವಸ್ಥೆಯೊಂದಿಗೆ ಹೊಲಿಸಿದಾಗ ಗ್ರಾಮೀಣ ಭಾಗದ ಪ್ರದೇಶಗಳಿಗೆ ಇದರಿಂದ ಹೆಚ್ಚಿನ ಸಹಾಯ ಸಿಗುತ್ತದೆ. ಭಾರತದಲ್ಲಿ ಸದ್ಯಕ್ಕೆ ಸಿಗುವ ದರದಲ್ಲಿಯೇ ಇಂಟರನೆಟ್ ಸಿಗುವುದೋ , ಇಲ್ಲ ದುಬಾರಿಯೋ ಕಾದು ನೋಡಬೇಕಿದೆ.
ಕೋಟ್ಯಧಿಪತಿ ಎಲಾನ್ ಮಸ್ಕ್ ಒಡೆತನದ ಉಪಗ್ರಹ ಆಧಾರಿತ ಇಂಟರ್ನೆಟ್ ಒದಗಿಸುವ ಸಂಸ್ಥೆ ಸ್ಟಾರ್‌ಲಿಂಕ್, ಭಾರತದ ಟೆಲಿಕಾಂ ದಿಗ್ಗಜ ಸಂಸ್ಥೆಗಳಾದ ಏರ್‌ಟೆಲ್ ಮತ್ತು ಜಿಯೋ ಸಹಭಾಗಿತ್ವದಲ್ಲಿ ಭಾರತವನ್ನು ಪ್ರವೇಶಿಸಲು ಸಿದ್ಧತೆ ನಡೆಸಿದೆ. ಸುಮಾರು 100ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸ್ಟಾರ್‌ಲಿಂಕ್ ಈ ಹಿಂದೆ ಹಲವು ಬಾರಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ಹಲವು ಪ್ರಯತ್ನ ನಡೆಸಿತ್ತು, ಆದರೆ ವಿಫಲಗೊಂಡಿತ್ತು.

ಸ್ಟಾರ್‌ಲಿಂಕ್ ಇದೊಂದು ಬ್ರಾಡ್ಬ್ಯಾಂಡ್ ಇಂಟರ್ನೆಟ್ ಪ್ರಸಾರದ ಉದ್ದೇಶ ಹೊಂದಿದ ಜಗತ್ತಿನ ಅತಿ ದೊಡ್ಡ ಉಪಗ್ರಹಗಳ ಗುಚ್ಛವಾಗಿದ್ದು, ಸ್ಟಾರ್‌ಲಿಂಕ್ ಉಪಗ್ರಹಗಳ ಗುಚ್ಛದಲ್ಲಿ 7,000 ಸಣ್ಣ ಉಪಗ್ರಹಗಳಿವೆ. ಇವೆಲ್ಲವೂ ಭೂಮಿಗೆ ಸನಿಹದ ಕಕ್ಷೆ (ಲೋ ಅರ್ಥ್ ಆರ್ಬಿಟ್)ಯಲ್ಲಿ ಅಂದರೆ ಭೂಮಿಯಿಂದ ಸುಮಾರು 550 ಕಿ.ಮೀ ದೂರದಲ್ಲಿ ಸ್ಟಾರ್‌ಲಿಂಕ್ ಉಪಗ್ರಹಗಳು ಕಾರ್ಯಾ ನಿರ್ವಹಿಸುತ್ತಿವೆ.