ರಾಷ್ಟ್ರೀಯ ಸುದ್ದಿ : ಉಪರಾಷ್ಟ್ರಪತಿ , ರಾಜ್ಯಸಭೆಯ ಸಭಾಪತಿಯೂ ಆದ ಜಗದೀಪ ದನ್ಕರ ರವರು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು (ರವಿವಾರ) ಬೆಳಿಗ್ಗೆ ದೆಹಲಿಯ ಏಮ್ಸ ಆಸ್ಪತ್ರೆಗೆ ದಾಖಲಾಗಿದ್ದಾರೆ.
73 ವರ್ಷದ ಧನ್ಕರ ರವರಿಗೆ ಬೆಳಗಿನ ಜಾವ ಎದೆನೋವಿನಿಂದ ಅಸ್ವಸ್ಥರಾದ ಕಾರಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಏಮ್ಸ್ ಗೆ ಬೇಟಿ ನೀಡಿದ್ದು , “ಏಮ್ಸ್ಗೆ ತೆರಳಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಜಿ ಅವರ ಆರೋಗ್ಯ ವಿಚಾರಿಸಿದೆ. ಅವರ ಉತ್ತಮ ಆರೋಗ್ಯ ಮತ್ತು ಶೀಘ್ರ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಟ್ವಿಟರ್ (ಎಕ್ಸ) ನಲ್ಲಿ ತಿಳಿಸಿದ್ದಾರೆ.