ಚಿನ್ನದ ಬೆಲೆಯು ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಕಳೆದ ಆರು ತಿಂಗಳಿನಿಂದ ಚಿನ್ನದ ಬೆಲೆ ಗಗನದತ್ತ ಮುಖ ಮಾಡಿದೆ. ಇದೀಗ ಮಾರ್ಚ್‌ನಲ್ಲಿ ಚಿನ್ನದ ಬೆಲೆಯು ಹೊಸ ದಾಖಲೆಯನ್ನು ಬರೆದಿದ್ದು. ಆಭರಣ ಪ್ರಿಯರು ಬೆಲೆ ನೋಡಿ ಅಚ್ಚರಿಗೆ ಒಳಗಾಗಿದ್ದಾರೆ. ಹೂಡಿಕೆಗಳಲ್ಲೇ ಈಗ ಬೆಸ್ಟ್ ಹೂಡಿಕೆ ಎಂದು ಉಳಿದಿರುವುದು ಚಿನ್ನದ ಬೆಲೆ ಮಾತ್ರ. ಕೇವಲ ಮೂರು ವರ್ಷಗಳ ಹಿಂದೆ 50,000ದಿಂದ 55,000 ಸಾವಿರ ರೂಪಾಯಿ ಆಗಿದ್ದ ಚಿನ್ನದ ಬೆಲೆಯು, ಇದೀಗ 90,000 ದ ಆಸುಪಾಸಿನಲ್ಲಿದೆ. ಲಕ್ಷ ಮುಟ್ಟುವುದು ಅತಿ ಸನಿಹ ಎನ್ನುತ್ತಿದ್ದಾರೆ ಮಾರುಕಟ್ಟೆ ತಜ್ಞರು.
ಚಿನ್ನದ ಓಟ ಹೀಗೆ ಮುಂದುವರೆದರೆ ಯುಗಾದಿ ಹಬ್ಬಕ್ಕೆಂದು ಚಿನ್ನ ಖರೀದಿ ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡುವಂತಾಗಿದೆ. ಯುಗಾದಿಗೂ ಮುನ್ನ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಚಿತ.
ಭಾರತೀಯ ಸಂಪ್ರದಾಯದಲ್ಲಿ ಮದುವೆ ಎಂದರೆ ಬಂಗಾರ ಇರಲೇಬೇಕು , ಹೀಗಾಗಿ ಚಿನ್ನ ಖಚಿತ,,ಜೇಬಿಗೆ ಕತ್ತರಿ ಉಚಿತ ಎನ್ನುತ್ತಿದ್ದಾರೆ ಹೆಣ್ಣು ಹೆತ್ತವರು.